Ration Card Correction: ರೇಷನ್ ಕಾರ್ಡ್ ತಿದ್ದುಪಡಿ / ಸೇರ್ಪಡೆಗೆ ಇನ್ನು 3 ದಿನ ಕಾಲಾವಕಾಶ? ಇಲ್ಲಿದೆ ವಿವರ

Advertisements
Share this post

ರಾಜ್ಯ ಸರಕಾರದ ಪಡಿತರ ಚೀಟಿ / ರೇಷನ್ ಕಾರ್ಡ್ ಹೊಂದಿರುವವರಿಗೆ (Ration Card Correction) ತಿದ್ದುಪಡಿಗೆ ಅವಕಾಶ ನೀಡಿದ್ದು, ನೀವು ನಿಮ್ಮ ಕಾರ್ಡ್ ನಲ್ಲಿ ಏನಾದರೂ ಬದಲಾವಣೆ, ಸದಸ್ಯರ ಸೇರ್ಪಡಿಸಲು ಅವಕಾಶವಿದ್ದು, ಇನ್ನು 3 ದಿನದ ಒಳಗಾಗಿ ನೀವು ಮಾಡಿಸಬೇಕಾಗಿರುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೆ 4 ದಿನಗಳ ಅವಕಾಶ :

ration card correction karnataka ಪಡಿತರ ಚೀಟಿ ತಿದ್ದುಪಡಿ ಮಾಹಿತಿ

ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ನಿಮ್ಮ ಪಡಿತರ ಚೀಟಿಯಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿಸಲು, ಹೊಸ ಸದಸ್ಯರ ಸೇರ್ಪಡಿಸಲು, ಮರಣ ಹೊಂದಿದ ವ್ಯಕ್ತಿಗಳ ಹೆಸರು ತೆಗೆದು ಹಾಕಲು, ಪಡಿತರ ಚೀಟಿಯಲ್ಲಿ ಮುಖ್ಯ ಸದಸ್ಯನ ಬದಲಾಯಿಸಲು, ಹೆಸರು ವಿಳಾಸ ಬದಲಾಯಿಸಲು ಹೀಗೆ ಎಲ್ಲಾ ರೀತಿಯ ತಿದ್ದುಪಡಿಯನ್ನು ನೀವು ಮಾಡಬಹುದಾಗಿದೆ.

ಇದನ್ನೂ ಓದಿ : ಶಕ್ತಿ ಯೋಜನೆಯ ಮಹಿಳೆಯರಿಗೆ ಉಚಿತ ಬಸ್ ಸೇವೆ ರದ್ದು? ಸ್ಪಷ್ಟೀಕರಣ ನೀಡಿದ ಕೆಎಸ್ಆರ್ಟಿಸಿ! Shakti yojana

Advertisements

ರೇಷನ್ ಕಾರ್ಡ್ ತಿದ್ದುಪಡಿಗೆ (Ration Card Correction) ಸಮಯ ನಿಗದಿ :

ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಪಡಿತರಚೀಟಿಯಲ್ಲಿನ ದೋಷವನ್ನು ಸರಿಪಡಿಸಲು ಕೇವಲ 4 ದಿನಗಳ ಕಾಲ ಅವಕಾಶ ನೀಡಿದ್ದು, ನೀವು ಆಗಸ್ಟ್ 18 ರಿಂದ 21 ರ ತನಕ ಮಧ್ಯಾಹ್ನ 12 ರಿಂದ ಸಂಜೆ 4 ಘಂಟೆ ಒಳಗೆ ನೀವು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಿಸಬಹುದು ?

ನಿಮ್ಮ ಪಡಿತರ ಚೀಟಿಯ ತಿದ್ದುಪಡಿ ಮಾಡಲು ಬಯಸಿದರೆ ನೀವು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ csc ಸೇವಾ ಕೇಂದ್ರಗಳಲ್ಲಿ ಅವರು ನೀಡಿರುವ ಸಮಯದಲ್ಲಿ ತಿದ್ದುಪಡಿಗೆ ಅವಕಾಶವಿದ್ದು, ಇಲ್ಲಿ ತಿದ್ದುಪಡಿ ಮಾಡಿದ ಬಳಿಕ ನಿಮಗೆ ತಿದ್ದುಪಡಿ ಮಾಡಿದ ಸ್ವೀಕೃತಿ ಪತ್ರ ನೀಡಲಾಗುತ್ತದೆ, ಇದನ್ನು ನಿಮ್ಮ ತಾಲೂಕು ಆಹಾರ ಕಚೇರಿ ಅಥವಾ ತಾಲೂಕು ಕಚೇರಿಯಲ್ಲಿ ಈ ಪತ್ರ ನೀಡಿ ಹೊಸ ತಿದ್ದುಪಡಿಯಾದ ರೇಷನ್ ಕಾರ್ಡ್ ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದೆ.

Advertisements

ಕಾರ್ಡ್ ತಿದ್ದುಪಡಿಗೆ ನೀವು ಸೂಕ್ತ ದಾಖಲೆಗಳೊಂದಿಗೆ ತೆರಳುವುದು ಉತ್ತಮ, ಸಾಮಾನ್ಯವಾಗಿ ಹೊಸ ಸದಸ್ಯರ ನೋಂದಣಿಗೆ ಜನನ ಪ್ರಮಾಣ ಪತ್ರ, ಅವರ ಆಧಾರ್ ಕಾರ್ಡ್, ಯಾರಾದರೂ ಮರಣ ಹೊಂದಿದ್ದಲ್ಲಿ ಅವರ ಮರಣದ ಪ್ರಮಾಣಪತ್ರ, ಹೆಸರನ್ನು ಆಧಾರ್ ನಲ್ಲಿರುವಂತೆ ಬದಲಾಯಿಸಬಹುದು, ಜೊತೆಗೆ ಕುಟುಂಬದ ಯಾವುದಾದರೂ ಒಬ್ಬ ಸದಸ್ಯನ OTP ಅಗತ್ಯವಾಗಿದ್ದು, ಹೋಗುವಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಬೇಕಾಗುತ್ತದೆ.

ಸರ್ವರ್ ಸಮಸ್ಯೆಯಿಂದ 4 ದಿನಗಳ ಒಳಗೆ ನೀವು ತಿದ್ದುಪಡಿ ಮಾಡಲು ಕಷ್ಟಸಾಧ್ಯ !

ಸರಕಾರವು ಹೊಸದಾಗಿ ಜಾರಿಗೆ ತಂದ ಯೋಜನೆಯು ಪಡಿತರ ಚೀಟಿ ಮೇಲೆ ಅವಲಂಬಿತವಾಗಿದ್ದು, ಇಲ್ಲಿ ಇರುವ ತಪ್ಪುಗಳಿಂದ ನಿಮಗೆ ಯೋಜನೆಯ ಹಣ ಬಾರದೇ ಇರುವ ಸಾಧ್ಯತೆ ಇದ್ದು, ಇದಕ್ಕಾಗಿಯೇ ಸರ್ಕಾರವು 4 ದಿನ ತಿದ್ದುಪಡಿ ಮಾಡಿಕೊಟ್ಟಿದೆ.

Advertisements

ಮುಖ್ಯವಾಗಿ ನಿಮ್ಮ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥ ಮೃತರಾಗಿದ್ದಲ್ಲಿ, ಪುರುಷನು ಕುಟುಂಬದ ಮುಖ್ಯಸ್ಥನಾಗಿದ್ದಲ್ಲಿ, ನಿಮ್ಮ ಕುಟುಂಬದ ಮುಖ್ಯಸ್ಥೆಯಾಗಿ ಅತ್ತೆ ಅಥವಾ ಸೊಸೆ ಬದಲಾಯಿಸಬೇಕಾದರೆ ಈ ಸಮಯದಲ್ಲಿ ಬದಲಾಯಿಸಬಹುದಾಗಿದೆ. ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಸರ್ಕಾರವು ಕೇವಲ 4 ದಿನ ತಿದ್ದುಪಡಿಗೆ ಅವಕಾಶ ನೀಡಿದ್ದು, ಜನರು ಏಕಕಾಲದಲ್ಲಿ ತಿದ್ದುಪಡಿಗೆ ಮುಗಿಬೀಳುತ್ತಿದ್ದಂತೆ ಸಹಜವಾಗಿಯೇ ಸರ್ವೆರ್ ಸಮಸ್ಯೆ ಇರಲಿದ್ದು, ಜನರು ತಿದ್ದುಪಡಿಗೆ ದಿನವಿಡೀ ಕಾಯಬೇಕಾಗವುದಂತೂ ಸತ್ಯ, ಆದ್ದರಿಂದ ಸರ್ಕಾರವು ಇನ್ನಷ್ಟು ದಿನ ತಿದ್ದುಪಡಿಗೆ ಅವಕಾಶ ಕೊಟ್ಟಿದ್ದಾರೆ ಜನರಿಗೆ ಅನುಕೂಲವಾಗುತ್ತಿತ್ತು.

Advertisements

ಸರ್ಕಾರದ ಯೋಜನೆಗಳಿಂದ ಈ ಬಾರಿ ಅತೀ ಹೆಚ್ಚು ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದು, ಸರ್ಕಾರವು ಪಡಿತರ ಚೀಟಿಯ ಅಕ್ರಮ ತಡೆಹಿಡಿಯಲು ಈಗ ಹೊಸ ಅರ್ಜಿಗೆ ಅವಕಾಶವನ್ನು ತಡೆಹಿಡಿದಿದ್ದು, ಅರ್ಹರಿಗೆ ಮಾತ್ರ ಹೊಸ ಪಡಿತರಚೀಟಿ ವಿತರಿಸುವುದಾಗಿ ತಿಳಿಸಿದ್ದು, ಈಗಾಗಲೇ ಇರುವ ಪಡಿತರ ಚೀಟಿ ಕೂಡ ಪರಿಶೀಲಿಸಿ ಅರ್ಹರಿಗೆ ಮಾತ್ರ ಕಾರ್ಡ್ ಇರುವಂತೆ ಹೊಸ ನಿಯಮ ರೂಪಿಸಿದೆ.

ಇದನ್ನೂ ಓದಿ : ಇಂತವರ ರೇಷನ್ ಕಾರ್ಡ್ ರದ್ದಾಗಲಿದೆ, ಬಿಪಿಎಲ್ ಕಾರ್ಡ್ ಹೊಂದಿದರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ ! Ration card updates

Advertisements

ಇದನ್ನೂ ಓದಿ : ಪಡಿತರ ಚೀಟಿಯನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ? How to download Ration Card in Mobile

ಇದನ್ನೂ ಓದಿ : ನಮಗೆ ಬಂತು ಗೃಹಜ್ಯೋತಿ ಯೋಜನೆಯಿಂದ 0 ವಿದ್ಯುತ್ ಬಿಲ್, ನೀವೂ ಉಚಿತ ವಿದ್ಯುತ್ ಬಿಲ್ ಪಡೆಯಲು ಈ ನಿಯಮ ತಪ್ಪದೇ ಪಾಲಿಸಬೇಕು ! Gruha jyothi scheme rules

Advertisements

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯ ಹಣ ನಿಮಗೆ ಬಂದಿದೆಯೇ? ಇಲ್ಲಿದೆ ಚೆಕ್ ಮಾಡುವ ವಿಧಾನ

ನಾವು ನೀಡಿರುವ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಬೇರೆಯವರಿಗೂ ಶೇರ್ ಮಾಡಿ ತಲುಪಿಸಿ, ಇದೇ ರೀತಿಯ ಇನ್ನಷ್ಟು ಉತ್ತಮ ಮಾಹಿತಿಗಾಗಿ ನಮ್ಮ ಇತರ ಲೇಖನ ಕೂಡ ಓದಬಹುದಾಗಿದೆ, ಹಾಗೂ ನಮ್ಮ ಹೊಸ ಮಾಹಿತಿಯನ್ನು ತಕ್ಷಣ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ, ಅಥವಾ ಬೆಲ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಸಬ್ಸ್ಕ್ರೈಬ್ ಮಾಡಿ

Advertisements
ration card correction,ರೇಷನ್ ಕಾರ್ಡ್ ಮಾಹಿತಿ,ರೇಷನ್ ಕಾರ್ಡ್ ತಿದ್ದುಪಡಿ,ಪಡಿತರ ಚೀಟಿ ತಿದ್ದುಪಡಿ,ಪಡಿತರ ಚೀಟಿ ಮಾಹಿತಿ

    Share this post

    Related post

    1 Comment

    Leave a Reply

    Your email address will not be published. Required fields are marked *

    Advertisements