ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ, ಇಲ್ಲವೇ ಈ ರೀತಿಯಾಗಿ ಚೆಕ್ ಮಾಡಿ !

Advertisements
Share this post

ಈ ಬಾರಿ ಮತದಾರರ ಪಟ್ಟಿ Voter List ಪರಿಷ್ಕರಿಸಿದ್ದು, ರಾಜ್ಯದಲ್ಲಿ ಒಟ್ಟು 5 ಲಕ್ಷಕ್ಕೂ ಅಧಿಕ ಮತದಾರರನ್ನು ಮತದಾರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎನ್ನುವ ಮಾಹಿತಿ ಇದ್ದು, ಇದರ ಪ್ರಕಾರ ಯಾರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೋ ಅವರಿಗೆ ಮುಂದಿನ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶವಿರುವುದಿಲ್ಲ.

WhatsApp Group Join Now
Telegram Group Join Now

ಈ ಬಗ್ಗೆ ವ್ಯಾಪಕ ಚರ್ಚೆ ಆರಂಭವಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಸಾವಿರಾರು ಜನರ ಅನಧಿಕೃತ ಅಥವಾ ಬೇರೆ ಕಾರಣಗಳಿಗಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿದ ಸಂಧರ್ಭದಲ್ಲಿ ತೆಗೆದು ಹಾಕಲಾಗಿದೆ.

Advertisements

ಇದನ್ನೂ ಓದಿ : ವೋಟರ್ ಐಡಿ ಆಧಾರ್ ಕಾರ್ಡ್ ಲಿಂಕ್ ಈಗ ನಿಮ್ಮ ಮೊಬೈಲ್ ನಲ್ಲೇ ಮಾಡುವ ಸುಲಭ ವಿಧಾನ ಇಲ್ಲಿದೆ

ನಿಮ್ಮ ಹೆಸರೂ ವೋಟರ್ ಪಟ್ಟಿಯಿಂದ (Voter List) ಇಲ್ಲದಿರಬಹುದು?

ಹೌದು, ಪ್ರತೀ ಜಿಲ್ಲೆಯಲ್ಲೂ ಸಾವಿರಾರು ಜನರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದು, ನಿಮ್ಮ ಹೆಸರು ಕೂಡ ಇದರಲ್ಲಿ ಸೇರಿರಬಹುದಾಗಿದ್ದು, ಅದ್ದರಿಂದ ಪ್ರತಿಯೊಬ್ಬರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂದು ತಕ್ಷಣ ಪರೀಕ್ಷಿಸಿಕೊಂಡು, ಒಂದು ವೇಳೆ ನಿಮ್ಮ ಹೆಸರು ಬಿಟ್ಟು ಹೋದಲ್ಲಿ ಕೂಡಲೇ ತಮ್ಮ ಹೆಸರನ್ನು ಮರು ನೊಂದಾಯಿಸಿಕೊಳ್ಳಬೇಕಾಗಿದೆ.

ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಇಲ್ಲವೇ ಎಂದು ನೋಡುವ ವಿಧಾನ ಹೇಗೆ ?

ಈಗ ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಹಾಯದಿಂದ ಮನೆಯಲ್ಲೇ ಕುಳಿತು ನಿಮ್ಮ ಅಥವಾ ನಿಮ್ಮ ಮನೆಯವರ, ಸ್ನೇಹಿತರ ಹೆಸರು ಮತದಾರರ ಪಟ್ಟಿ (Voter List) ಯಲ್ಲಿ ಇದೆಯೇ ಅಥವಾ ಇಲ್ಲವೇ ಏನು ಚೆಕ್ ಮಾಡಬಹುದಾಗಿದೆ, ನೀವು ಇಂಟರ್ನೆಟ್ ಮುಖಾಂತರ ಚುನಾವಣಾ ಆಯೋಗದ ಅಧೀಕೃತ ವೆಬ್ಸೈಟ್ ನಲ್ಲಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರೀಕ್ಷಿಸಬಹುದಾಗಿದೆ.

ವೆಬ್ಸೈಟ್ ಮೂಲಕ ಚೆಕ್ ಮಾಡಿ :

https://electoralsearch.in ಈ ಅಧಿಕೃತ ವೆಬ್ಸೈಟ್ ಕ್ಲಿಕ್ ಮಾಡಿ,

ಇಲ್ಲಿ ನಿಮಗೆ Search by Details ಹಾಗೂ Search by EPIC No ಆಯ್ಕೆ ಇರಲಿದ್ದು, Search by EPIC No ಆಯ್ಕೆ ಮಾಡಿ ಇಲ್ಲಿ ನಿಮ್ಮ ವೋಟರ್ ಐಡಿ EPIC No ದಾಖಲಿಸಿ ಸರ್ಚ್ ಮಾಡಿ. ಅಥವಾ Search by Details ಮೂಲಕ ನೀವು ನಿಮ್ಮ ಹೆಸರು ವಿಳಾಸ ಇತರ ಕೊಟ್ಟಿರುವ ವಿಷಯಗಳನ್ನು ದಾಖಲಿಸಿ, ನಿಮ್ಮ ಮತದಾರ ವಿವರಗಳು ಸಿಗಲಿವೆ.

ಇಲ್ಲಿ ನಿಮಗೆ ನಿಮ್ಮ ಚುನಾವಣಾ ಗುರುತಿನ ಚೀಟಿಯ ವಿವರಗಳು ನೀವು ನೋಡಬಹುದಾಗಿದ್ದು, ನಿಮ್ಮ ಹೆಸರು Voter List ನಲ್ಲಿ ಇದೆಯಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಿ.

ಕರೆ ಮಾಡಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿ :

ನಿಮ್ಮ ಮೊಬೈಲ್ ನಲ್ಲಿ 1950 ಈ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಚುನಾವಣಾ ಗುರುತಿನ ಚೀಟಿಯ EPIC ನಂಬರ್ ಹಾಗೂ ಅಲ್ಲಿ ಕೇಳುವ ವಿವರ ತಿಳಿಸಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.

ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದಲ್ಲಿ, ಅಥವಾ ಇನ್ನೇನಾದರೂ ಸಂದೇಹಗಳಿದ್ದಲ್ಲಿ, ಉಚಿತ ದೂರವಾಣಿ ಸಂಖ್ಯೆ 1950 ಗೆ ಕರೆ ಮಾಡಬಹುದು.

ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿ (Voter List)ಯಲ್ಲಿ ಇಲ್ಲದಿದ್ದಲ್ಲಿ ನಿಮ್ಮ ವಲಯದ ಬೂತ್ ಮಟ್ಟದ ಸಹಾಯಕರನ್ನು ಅಥವಾ ನಿಮ್ಮ ವಲಯದ ಬಿ.ಎಲ್.ಓ ಗಳನ್ನು ಸಂಪರ್ಕಿಸಿಬಹುದಾಗಿದೆ.

ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಕೆಳಗಿನ ಸೋಶಿಯಲ್ ಲಿಂಕ್ ಕ್ಲಿಕ್ ಮಾಡಿ ಶೇರ್ ಮಾಡಿ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ರೂಪದಲ್ಲಿ ತಿಳಿಸಿ.

ಇದೇ ರೀತಿಯ ನಮ್ಮ ಎಲ್ಲಾ ಮಾಹಿತಿಗಳನ್ನು ತಕ್ಷಣ ನೋಟಿಫಿಕೇಶನ್ ಮೂಲಕ ಪಡೆಯಲು ಕೆಳಗಡೆ ಇರುವ ಬೆಲ್ 🔔 ಒತ್ತಿ Allow ಮಾಡಿ.

ನಮ್ಮ ವಾಟ್ಸಾಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ


Share this post

Leave a Comment

Advertisements
WhatsApp Group Join Now
Telegram Group Join Now